ಮಂಗಳೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಯೆನಪೋಯ ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. " ಕನ್ನಡ ಕೇವಲ ನಮ್ಮ ಭಾಷೆ ಮಾತ್ರವಲ್ಲ ; ನಮ್ಮ ಉಸಿರು, ನಮ್ಮನ್ನು ಪೊರೆಯುವ ತಾಯಿ ಕನ್ನಡ. ಕನ್ನಡ ನಾಡು ನುಡಿಯನ್ನು ರಕ್ಷಿಸುವ , ನಮ್ಮ ಸಂಸ್ಕ್ರತಿಯನ್ನು ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ" ಎಂಬ ಮಾತನ್ನು ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದ ಶಂರೀನಾ ರವರು ತಿಳಿಸಿದರು. "ಪ್ರತಿಯೊಬ್ಬ ಕನ್ನಡಿಗನು ಕನ್ನಡವನ್ನು ಬಳಸಿದ್ದಲ್ಲಿ ಮಾತ್ರ ಕನ್ನಡ ಭಾಷಾಭಿಮಾನ ಮೂಡಲು ಸಾಧ್ಯ. ಕೇವಲ ಬಾಯಿ ಮಾತಿಗೆ ಕನ್ನಡ ಪ್ರೇಮ ಸೀಮಿತವಾಗಿರಬಾರದು ; ನಮ್ಮ ದಿನನಿತ್ಯದ ಕಾರ್ಯ ಚಟುವಟಿಕೆಗಳಲ್ಲಿ ಬಳಸಿದ್ದಲ್ಲಿ ನಮ್ಮ ಕನ್ನಡ ಶ್ರೀಮಂತವಾಗಿರಲು ಸಾಧ್ಯ" ಎಂಬ ಮಾತನ್ನು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಅಲಕರಿಸಿಕೊಂಡಿದ್ದ ಕಾಲೇಜಿನ ಪ್ರಾಂಶುಪಾಲರಾಗಿರುವಂತಹ ಶ್ರೀಯುತ ಉಜ್ವಲ್ ಮಿನೇಜಸ್ ರವರು ತಿಳಿಸಿದರು. ಕಾರ್ಯಕ್ರಮದಲ್ಲಿ ನಮ್ಮ ಸಂಸ್ಥೆಯ ವಲಯ ಸಂಯೋಜನಾಧಿಕಾರಿಯಾಗಿರುವಂತಹ ಶ್ರೀಮತಿ ಇವಿಯೆಟ್ ಪಿರೇರಾ , ಶಾಲಾ ಉಪಪ್ರಾಂಶುಪಾಲರಾಗಿರುವಂತಹ ಶ್ರೀಯುತ ಪದ್ಮನಾಭನ್ ಸರ್ ರವರು ಉಪಸ್ಥಿತರಿದ್ದರು. ದಿನದ ಸಂದೇಶವನ್ನು ಕಾಲೇಜು ವಿದ್ಯಾರ್ಥಿಗಳಾಗಿರುವಂತಹ ಸೌದ್, ಮತ್ತು ಸಫ್ವಾನ್ ನೀಡಿದರು. ಅತಿಥಿಗಳನ್ನು ವಿದ್ಯಾರ್ಥಿನಿ ಕುಮಾರಿ ಅನನ್ಯ ಪ್ರಸಾದ್ ರವರು ಸ್ವಾಗತಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯ ಕ್ರಮಗಳು ನೆರವೇರಿಸಲ್ಪಟ್ಟಿತು. ವಿದ್ಯಾರ್ಥಿ ರಜತ್ ರವರು ವಂದನಾರ್ಪಣೆಯನ್ನು ಸಲ್ಲಿಸಿದರು. ಉಪನ್ಯಾಸಕ ಶ್ರೀಯುತ ನಿಕೇತ್ ಮೋಹನ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.